Akshay_tritiya

ಅಕ್ಷಯ ತೃತೀಯದ ಬಗ್ಗೆ ಜನರಿಗೆ ಇರುವ ತಪ್ಪು ತಿಳುವಳಿಕೆ ಏನು ?

ಅಕ್ಷಯ ತೃತೀಯ ಅಂದರೆ ನಮ್ಮ ಮನಸ್ಸಿಗೆ ಬರುವುದು ಚಿನ್ನದ ಅಂಗಡಿಗಳಲ್ಲಿ ಕಂಡುಬರುವ ಆಭರಣಗಳ ಜಾಹೀರಾತುಗಳು. ಚಿನ್ನದ ಮೇಲಿನ ಕಡಿತಗಳು ಚಿನ್ನ ಬೆಳ್ಳಿಯನ್ನು ಕೊಂಡುಕೊಂಡರೆ, ವರ್ಷ ಪೂರ್ತಿ ನೀವು ಚಿನ್ನವನ್ನು ತೆಗೆದು ಕೊಳ್ಳುತ್ತೀರಿ! ಎನ್ನುವಂತಹ ಅವರ ಭಾಷಣಗಳು.

ಚಿನ್ನ ತೆಗೆದುಕೊಳ್ಳಲೇಬೇಕೆಂಬ ಹಠದಲ್ಲಿ ಸಾಲವನ್ನಾದರೂ ಮಾಡಿ ತೆಗೆದುಕೊಳ್ಳುವ ಎಷ್ಟೋ, ಮಂದಿಗೆ ನಿಜವಾದ ಅಕ್ಷಯ ತೃತೀಯದ ಬಗ್ಗೆ ಗೊತ್ತೇ ಇರುವುದಿಲ್ಲ.

ಶ್ರೀಮಂತರ ಆದಿಯಾಗಿ ಕೂಲಿ ಮಾಡುವವರಿಗೂ ಕೂಡ ಅಂದು ಚಿನ್ನ ತೆಗೆದುಕೊಳ್ಳಲೇಬೇಕೆಂಬ ಹಠ ಎಲ್ಲರ ಮನಸ್ಸಿಗೂ ಚಾಪು ಒತ್ತಿದಂತೆ ಮಾಡಿರುವುದು ಚಿನ್ನದ ಅಂಗಡಿಯವರು. ನಿಜವಾದ ಅಕ್ಷಯ ತೃತೀಯ ಬಗ್ಗೆ ತಿಳಿದುಕೊಳ್ಳೋಣ..

ಅಕ್ಷಯ ತೃತೀಯದ ಆಚರಣೆಗಳ ಬಗ್ಗೆ ಎಲ್ಲಿ ಉಲ್ಲೇಖವಿದೆ  ?

ಭವಿಷ್ಯತ್ ಪುರಾಣದಲ್ಲಿ ಶ್ರೀಕೃಷ್ಣಪರಮಾತ್ಮನೇ ಅಕ್ಷಯತೃತೀಯದ ಅಸಾಧಾರಣ ಮಹಿಮೆಯನ್ನು ವರ್ಣಿಸಿರುವುದಾಗಿ ಉಲ್ಲೇಖವಿದೆ.

ಶ್ಲೋಕ : ಬಹುನಾತ್ರ ಕಿಮುಕ್ತೇನ ಕಿಂ ಬಹ್ವಕ್ಷರಮಾಲಯಾ |

ವೈಶಾಖಸ್ಯ ಸಿತಾಮೇಕಾಂ ತೃತೀಯಾಮಕ್ಷಯಾಂ ಶೃಣು ||

ಗಂಗಾಸ್ನಾನಕ್ಕೆ ಮತ್ತು ಶ್ರೀಕೃಷ್ಣನನ್ನು ಧೂಪ, ದೀಪ, ಪುಷ್ಪ ಮತ್ತು ವಿಶೇಷವಾಗಿ ಚಂದನ ಲೇಪದಿಂದ ಅರ್ಚನೆ ಮಾಡುವುದಕ್ಕೆ ಈ ದಿನವನ್ನು ಅತಿ ಪ್ರಶಸ್ತವನ್ನಾಗಿ ಹೇಳಿದೆ.

ಅಕ್ಷಯ ತೃತೀಯದ ಅರ್ಥ ಏನು ?

ಶ್ಲೋಕ | ಸ್ನಾತ್ವಾ ಹುತ್ವಾ ಚ ಜಪ್ತ್ವಾ ಚ ದತ್ತ್ವಾನಂತಫಲಂ ಲಭೇತ್ ||

ಈ ಹಬ್ಬದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು , ಅಧ್ಯಯನ, ತರ್ಪಣ, ದಾನಾದಿಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ ಇದನ್ನು ಅಕ್ಷಯ ತೃತೀಯ ಎಂದು ಕರೆಯಲಾಗಿದೆ ಎಂದು ವ್ರತರಾಜದಲ್ಲಿ ಉಲ್ಲೇಖಿಸಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಈ ಹೆಸರು ಹೊಂದಾಣಿಕೆಯಾಗುತ್ತದೆ.

ಅಕ್ಷಯ ತೃತೀಯದ ಹಿಂದೂ ಪಂಚಾಂಗದ ಪ್ರಕಾರ ಯಾವಾಗ ಬರುತ್ತದೆ ?

ಶ್ಲೋಕ | ಪೂರ್ವಾಹ್ಣೇ ತು ಸದಾ ಕಾರ್ಯಾಃ ಶುಕ್ಲೇ ಮನುಯುಗಾದಯಃ |

ದೈವ್ಯೇ ಕರ್ಮಣಿ ಪಿತ್ಯ್ರೇ ಚ ಕೃಷ್ಣೇ ಚೈವಾಪರಾಹ್ಣಿಕಾಃ ||

ವೈಶಾಖಸ್ಯ ತೃತೀಯಾಂ ಚ ಪೂರ್ವವಿದ್ಧಾಂ ಕರೋತಿ ವೈ |

ಹವ್ಯಂ ದೇವಾ ನ ಗೃಹ್ಣನ್ತಿ ಕವ್ಯಂ ಚ ಪಿತರಸ್ತಥಾ ||

ವೈಶಾಖ ಮಾಸ ಶುಕ್ಲಪಕ್ಷ ತೃತೀಯ ಅಥವಾ ತದಿಗೆ ದಿನ ರೋಹಿಣಿ/ಮೃಗಶಿರಾ ನಕ್ಷತ್ರವು ಇದ್ದರೆ ಅಂದು ಮೂರುವರೆಗಳಿಗೆ ಮುಹೂರ್ತದಲ್ಲಿ ಬರುವ ತಿಥಿ ಅಕ್ಷಯ ತೃತೀಯ.

Leave a Comment

Your email address will not be published. Required fields are marked *

× Connect with guruji